ಬಜಾಜ್ ಫೈನಾನ್ಸ್ ಲಿಮಿಟೆಡ್‌ 2021 ಫೆಬ್ರವರಿ 21 ರಿಂದ ತನ್ನ FD ಬಡ್ಡಿ ದರಗಳನ್ನು ಏರಿಕೆ ಮಾಡಿದೆ

ಬಜಾಜ್ ಫೈನಾನ್ಸ್ ಲಿಮಿಟೆಡ್‌ 2021 ಫೆಬ್ರವರಿ 21 ರಿಂದ ತನ್ನ FD ಬಡ್ಡಿ ದರಗಳನ್ನು ಏರಿಕೆ ಮಾಡಿದೆ

ಬಜಾಜ್ ಫೈನಾನ್ಸ್ ಲಿಮಿಟೆಡ್‌ 2021 ಫೆಬ್ರವರಿ 21 ರಿಂದ ತನ್ನ FD ಬಡ್ಡಿ ದರಗಳನ್ನು ಏರಿಕೆ ಮಾಡಿದೆ  ಮುಖ್ಯಾಂಶಗ ಳು:

  • ಪರಿಷ್ಕರಿಸಿದ ಬಡ್ಡಿ ದರಗಳು ಹೊಸ ಡೆಪಾಸಿಟ್‌ಗಳಿಗೆ ಮತ್ತು ಪಕ್ವವಾಗುವ ಡೆಪಾಸಿಟ್‌ಗಳ ನವೀಕರಣಕ್ಕೆ ಅನ್ವಯಿಸುತ್ತದೆ
  • 36 ರಿಂದ 60 ತಿಂಗಳುಗಳ ಅವಧಿಯ ರೂ. 5 ಕೋಟಿಗಿಂತ ಕಡಿಮೆ ಮೊತ್ತದ ಫಿಕ್ಸೆಡ್ ಡೆಪಾಸಿಟ್‌ಗಳ ಮೇಲೆ ಪರಿಷ್ಕರಿಸಿದ ಬಡ್ಡಿ ದರಗಳು ಅನ್ವಯವಾಗುತ್ತವೆ

09 ಫೆಬ್ರವರಿ 2021

ಪುಣೆ, ಮಹಾರಾಷ್ಟ್ರ: ಬಜಾಜ್‌ ಫಿನ್‌ಸರ್ವ್‌ನ ಸಾಲ ಮತ್ತು ಹೂಡಿಕೆ ವಿಭಾಗವಾದ ಬಜಾಜ್‌ ಫೈನಾನ್ಸ್ ಲಿಮಿಟೆಡ್‌ (ಬಿಎಫ್‌ಎಲ್‌) 36 ರಿಂದ 60 ತಿಂಗಳುಗಳ ತನ್ನ fixed deposit (FD)ಬಡ್ಡಿ ದರಗಳನ್ನು 40 ಮೂಲಾಂಶಗಳವರೆಗೆ ಏರಿಕೆ ಮಾಡಿದೆ. ಈ ಪರಿಷ್ಕರಿಸಿದ, ರೂ. 5 ಕೋಟಿವರೆಗಿನ ಡೆಪಾಸಿಟ್‌ ಮೇಲಿನ ಬಜಾಜ್‌ ಫೈನಾನ್ಸ್ ಬಡ್ಡಿ ದರಗಳು 2021 ಫೆಬ್ರವರಿ 1 ರಿಂದ ಜಾರಿಗೆ ಬಂದಿವೆ. ಈ ಪರಿಷ್ಕರಿಸಿದ ಬಡ್ಡಿ ದರಗಳು ಹೊಸ ಡೆಪಾಸಿಟ್‌ಗಳಿಗೆ ಮತ್ತು ಪಕ್ವವಾ ಗುವ ಡೆಪಾಸಿಟ್‌ಗಳ ನವೀಕರಣಕ್ಕೆ ಅನ್ವಯಿಸುತ್ತದೆ.

ಹಿರಿಯ ನಾಗರಿಕರಲ್ಲದವರಿಗೆ ಸಂಚಿತ ಎಫ್‌ಡಿಯ ಹಳೆಯ ಮತ್ತು ಹೊಸ ಬಡ್ಡಿ ದರಗಳ ಹೋಲಿಕೆಯನ್ನು ಈ ಕೆಳಗೆ ನೀಡಲಾಗಿದೆ:

ಅವಧಿ (ತಿಂಗಳುಗಳು) ಹಿಂದಿನ ಬಡ್ಡಿ ದರಗಳು ಹೊಸ ಬಡ್ಡಿ ದರಗಳು (ಜಾರಿ 01 ಫೆಬ್ರವರಿ 2021)
12-23 6.10% 6.15%
24-35 6.30% 6.60%
36-60 6.60% 7.00%

ಈ ಮೇಲಿನ ಕೋಷ್ಟಕದ ಪ್ರಕಾರ, 12 ತಿಂಗಳುಗಳಿಂದ 23 ತಿಂಗಳುಗಳವರೆಗಿನ ಎಫ್‌ಡಿಗೆ 5 ಮೂಲಾಂಶ ಹೆಚ್ಚಳ ಮಾಡಲಾಗಿದೆ ಮತ್ತು 24 ತಿಂಗಳುಗಳಿಂದ 36 ತಿಂಗಳುಗಳ ಎಫ್‌ಡಿಗೆ 30 ಮೂಲಾಂಶ ಹೆಚ್ಚಳ ಮಾಡಲಾಗಿದೆ. 36 ರಿಂದ 60 ತಿಂಗಳಗಳವರೆಗಿನ ಡೆಪಾಸಿಟ್‌ಗಳ ಮೇಲೆ 40 ಮೂಲಾಂಶಗಳ ಹೆಚ್ಚಳ ಮಾಡಲಾಗಿದೆ. ಇತ್ತೀಚಿನ ಪರಿಷ್ಕ ರಣೆಯ ನಂತರ, 36 ರಿಂದ 60 ತಿಂಗಳುಗಳ ಮಧ್ಯದ ಡೆಪಾಸಿಟ್‌ಗಳು 7% ರಿಟರ್ನ್ ಒದಗಿಸುತ್ತದೆ ಮತ್ತು ಹಿರಿಯ ನಾಗರಿಕರಿಗೆ ಹೆಚ್ಚುವರಿಯಾಗಿ ಆನ್‌ಲೈನ್‌ ಹೂಡಿಕೆಯ ಮೇಲೆ ಶೇ. 0.10 ರ ಪ್ರಯೋಜನ ಸಿಗಲಿದೆ. ಇದೇ ಅವಧಿಗೆ, ಹಿರಿಯ ನಾಗರಿಕರು 0.25% ಅಧಿಕ ಎಫ್‌ಡಿ ದರಗಳನ್ನು ಪಡೆಯಬಹುದಾಗಿದೆ. ಇದರಿಂದ, ಹೂಡಿಕೆಯ ವಿಧಾನ ಯಾವುದೇ ಆಗಿದ್ದರೂ ಖಚಿತ 7.25% ರಿಟರ್ನ್ ಸಿಗಲಿದೆ.

ಬಜಾಜ್‌ ಫೈನಾನ್ಸ್ ಒದಗಿಸಿರುವ ಪರಿಷ್ಕರಿಸಿದFD interest rates ವಿವರ ಇಲ್ಲಿದೆ.

ಹಿರಿಯ ನಾಗರಿಕರಲ್ಲದವರಿಗೆ ಬಜಾಜ್‌ ಫೈನಾನ್ಸ್‌ ಎಫ್‌ಡಿ ದರಗಳು, ಜಾರಿ 01 ಫೆಬ್ರವರಿ 2021

ಅವಧಿ (ತಿಂಗಳುಗಳು) ಕ್ರೋಢೀಕೃತ ಕ್ರೋಢೀಕೃತವಲ್ಲದ
ಮಾಸಿಕ ತ್ರೈಮಾಸಿಕ ಅರ್ಧವಾರ್ಷಿಕ ವಾರ್ಷಿಕ
12 – 23 6.15% 5.98% 6.01% 6.06% 6.15%
24 – 35 6.60% 6.41% 6.44% 6.49% 6.60%
36- 60 7.00% 6.79% 6.82% 6.88% 7.00%

ಗ್ರಾಹಕರ ವಿಭಾಗವನ್ನು ಆಧರಿಸಿ ದರ ಪ್ರಯೋಜನಗಳು (ಜಾರಿ 01 ಫೆಬ್ರವರಿ 2021):

+ 0.25% ಹಿರಿಯ ನಾಗರಿಕರಿಗೆ

+ 0.10% ಬಜಾಜ್ ಫಿನ್‌ಸರ್ವ್‌ ವೆಬ್‌ಸೈಟ್ ಅಥವಾ ಆಪ್‌ ಮೂಲಕ ಎಫ್‌ಡಿ ಬುಕ್‌ ಮಾಡುವ ನೇರ ಗ್ರಾಹಕರಿಗೆ

ಟಿಪ್ಪಣಿ: Bajaj Finance online FD ಹೂಡಿಕೆ ಮಾಡುವ ಹಿರಿಯ ನಾಗರಿಕರು ಹೂಡಿಕೆಯ ವಿಧಾನ ಯಾವುದೇ ಆಗಿದ್ದ ರೂ, ಒಂದು ಪ್ರಯೋಜನವನ್ನಂತೂ (0.25% ದರ ಪ್ರಯೋಜನ) ಪಡೆಯುತ್ತಾರೆ

ಬಜಾಜ್‌ ಫೈನಾನ್ಸ್‌ ಫಿಕ್ಸೆಡ್ ಡೆಪಾಸಿಟ್‌ನೊಂದಿಗೆ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿ

ಮನೆಯಿಂದಲೇ, ಸಂಪೂರ್ಣ ಕಾಗದ ರಹಿತ ಆನ್‌ಲೈನ್‌ ಪ್ರಕ್ರಿಯೆ ಯೊಂದಿಗೆ ಹೂಡಿಕೆ ಮಾಡುವ ಅನುಕೂಲವನ್ನು ಬಜಾಜ್‌ ಫೈನಾ ನ್ಸ್‌ ಒದಗಿಸುತ್ತದೆ. ಇದು ಹೂಡಿಕೆದಾರರು ತಮ್ಮ ಮನೆಯಿಂದಲೇ ಆರಾಮವಾಗಿ ಹೂಡಿಕೆ ಮಾ ಡಬಹುದು. ಈ ಆನ್‌ಲೈನ್‌ ಎಫ್‌ಡಿ ಪ್ರಕ್ರಿಯೆಯಿಂದ, ಎಫ್‌ಡಿ ಬುಕ್‌ ಮಾಡಲು ಕೆಲವೇ ನಿಮಿಷಗಳನ್ನು ತೆಗೆದುಕೊ ಳ್ಳುತ್ತದೆ ಮತ್ತು ಈ ಆಕರ್ಷಕ ಎಫ್‌ಡಿ ಬಡ್ಡಿ ದರಗಳ ಪ್ರಯೋಜನವನ್ನು ಹೂಡಿಕೆದಾರರು ಸುಲಭವಾಗಿ ಪಡೆಯ ಬಹುದು.

ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ ಬಗ್ಗೆ 

ಬಜಾಜ್‌ ಫಿನ್‌ಸರ್ವ್‌ ಗ್ರೂಪ್‌ನ ಸಾಲ ಕಂಪನಿಯಾಗಿರುವ ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ ಭಾರತದ ಮಾರುಕಟ್ಟೆ ಯಲ್ಲಿ ಅತ್ಯಂತ ವೈವಿಧ್ಯಮಯ ಎನ್‌ಬಿಎಫ್‌ಸಿಯಾಗಿದ್ದು, ದೇಶಾದ್ಯಂತ 40 ಮಿಲಿಯನ್‌ಗೂ ಹೆಚ್ಚು ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. ಪುಣೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಕಂಪನಿಯು ಗೃಹ ಬಳಕೆ ವಸ್ತುಗಳ ಸಾಲ ಳು, ಲೈಫ್‌ಸ್ಟೈಲ್‌ ಫೈನಾನ್ಸ್, ಲೈಫ್‌ಕೇರ್‌ ಫೈನಾನ್ಸ್‌, ಡಿಜಿಟಲ್‌ ಪ್ರಾಡಕ್ಟ್ ಫೈನಾನ್ಸ್‌, ವೈಯಕ್ತಿಕ ಸಾಲಗಳು, ಸ್ವತ್ತಿನ ಮೇ ಲೆ ಸಾಲ, ಸಣ್ಣ ವಹಿವಾಟು ಸಾಲ, ಹೋಮ್‌ ಲೋನ್‌ಗಳು, ಕ್ರೆಡಿಟ್ ಕಾರ್ಡ್‌ಗಳು, ದ್ವಿಚಕ್ರ ವಾಹನ ಮತ್ತು ತ್ರಿಚಕ್ರ ವಾಹನ ಸಾಲಗಳು, ವಾಣಿಜ್ಯ ಸಾಲ/ಎಸ್‌ಎಂಇ ಸಾಲಗಳು, ಸೆಕ್ಯುರಿಟಿಗಳ ಮೇಲೆ ಸಾಲ ಮತ್ತು ಗ್ರಾಮೀಣ ಹಣಕಾಸು ಸೌಲಭ್ಯ ಹಾಗೂ ಚಿನ್ನದ ಮೇಲೆ ಸಾಲ ಮತ್ತು ವಾಹನ ಮರುಹಣಕಾಸು ಸಾಲಗಳನ್ನೂ ಇದು ಒದಗಿಸುತ್ತದೆ. ಈಗ ದೇಶದಲ್ಲಿ ಎಲ್ಲ ಎನ್‌ಬಿಎಫ್‌ಸಿಗಳ ಪೈಕಿ ಅತ್ಯಧಿಕ ಕ್ರೆಡಿಟ್ ರೇಟಿಂಗ್‌ ಎಫ್‌ಎಎಎ/ಸ್ಟೇಬಲ್‌ ಹೊಂದಿರುವ ಹೆಮ್ಮೆ ಬಜಾಜ್‌ ಫೈನಾನ್ಸ್‌ ಲಿಮಿಟೆಡ್‌ನದ್ದಾಗಿದೆ.

ಇನ್ನಷ್ಟು ತಿಳಿಯಲು ದಯವಿಟ್ಟು ಭೇಟಿ ನೀಡಿhttps://www.bajajfinserv.in