ಬಜಾಜ್ ಫೈನಾನ್ಸ್‌ನಿಂದ ಹೆಚ್ಚಿನ FD ಬಡ್ಡಿ ದರಗಳೊಂದಿಗೆ ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಿ

ಬಜಾಜ್ ಫೈನಾನ್ಸ್‌ನಿಂದ ಹೆಚ್ಚಿನ FD ಬಡ್ಡಿ ದರಗಳೊಂದಿಗೆ ನಿಮ್ಮ ಉಳಿತಾಯವನ್ನು ಹೆಚ್ಚಿಸಿಕೊಳ್ಳಿ

ನೀವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬೆಳೆಸುವುದು ಈಗ ಹಿಂದೆಂದಿಗಿಂತಲೂ ಸುಲಭವಾಗಿದೆ. ಡಿಜಿಟಲೀಕರಣದಿಂದಾಗಿ, ಹೂಡಿಕೆಯ ಅವಕಾಶಗಳು ಹೆಚ್ಚಾಗಿವೆ ಮತ್ತು ಮೊದಲಿಗಿಂತ ಸುಲಭ ಲಭ್ಯವಾಗಿದೆ. ಆದಾಗ್ಯೂ, ಈ ಆಯ್ಕೆಗಳನ್ನು ನಿಜವಾಗಿಯೂ ಸರಿಯಾಗಿ ಬಳಸಿಕೊಳ್ಳಲು ನೀವು ವೈವಿಧ್ಯಗೊಳಿಸಿಕೊಳ್ಳಬೇಕು ಮತ್ತು ನೀವು ಮಾರುಕಟ್ಟೆಗೆ ಸಂಪರ್ಕಗೊಂಡ ವಿಧಾನಗಳು ಮತ್ತು ಸುರಕ್ಷಿತ ಆದಾಯದ ಭರವಸೆ ನೀಡುವ ವಿಧಾನಗಳ ನಡುವೆ ಆರೋಗ್ಯಕರ ಸಮತೋಲನವನ್ನು ಹೊಂದಿರಬೇಕು. ಎರಡನೆಯದನ್ನು ಆಯ್ಕೆಮಾಡುವಾಗ fixed deposit (ಸ್ಥಿರ ಠೇವಣಿ) ಅತ್ಯುತ್ತಮ ಆಯ್ಕೆಯಾಗಿದೆ. ಅದನ್ನು ಗಮನದಲ್ಲಿಟ್ಟುಕೊಂಡು, ಬಜಾಜ್ ಫೈನಾನ್ಸ್ ಫಿಕ್ಸೆಡ್ ಡೆಪಾಸಿಟ್ ಬೋರ್ಡ್‌ ಹೆಚ್ಚಿನ ಎಫ್‌ಡಿ ದರಗಳನ್ನು ನೀಡುತ್ತದೆ ಮತ್ತು ಸ್ಥಿರ ಹೂಡಿಕೆಯ ಭರವಸೆ ನೀಡುತ್ತದೆ. ಇಂತಹ ಕೊಡುಗೆಗಳಲ್ಲಿ ಹೂಡಿಕೆ ಮಾಡಲು ಎಫ್‌ಡಿ ಬಡ್ಡಿ ದರಗಳು ಹಲವು ಕಾರಣಗಳ ಪೈಕಿ ಪ್ರಮುಖವಾಗಿದೆ. ಮತ್ತು ಅದು ನಿಮಗೆ ಲಾಭ ಗಳಿಸಲು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ಮುಂದೆ ಓದಿ.

ದೀರ್ಘಾವಧಿಯಲ್ಲಿ ಹೂಡಿಕೆ ಮಾಡಿ

ಎಫ್‌ಡಿಯಲ್ಲಿ ಹೂಡಿಕೆ ಮಾಡುವಾಗ, ಉತ್ತಮ ಆದಾಯದ ಲಾಭ ಪಡೆಯುವ ಉತ್ತಮ ಮಾರ್ಗವೆಂದರೆ ನಿಮ್ಮ ಹಣವನ್ನು ದೀರ್ಘಾವಧಿಗೆ ಹೂಡಿಕೆ ಮಾಡುವುದು. ಸಂಚಿತ ಬಡ್ಡಿಯ ವಿಧಾನದಿಂದ, ನೀವು ಹೆಚ್ಚು ಕಾಲ ಹೂಡಿಕೆ ಮಾಡಿದಷ್ಟೂ, ನಿಮ್ಮ ಆದಾಯವು ಉತ್ತಮವಾಗಿರುತ್ತದೆ. ನಿಮ್ಮ ನಿಶ್ಚಿತ ಠೇವಣಿಗೆ ಅನ್ವಯವಾಗುವ ಎಫ್‌ಡಿ ಬಡ್ಡಿ ದರಗಳು ಅವಧಿಯನ್ನು ಆಧರಿಸಿ ಬದಲಾಗಬಹುದು ಎಂಬುದನ್ನು ಗಮನಿಸಿ. ಉತ್ತಮ ಆದಾಯವನ್ನು ಪಡೆಯಲು, ಸಾಧ್ಯವಾದಷ್ಟು ದೀರ್ಘವಾದ ಅವಧಿಯನ್ನು ಆರಿಸಿ. ಅವಧಿಯು ಕನಿಷ್ಠ ಮೂರು ವರ್ಷಗಳು ಅಥವಾ ಅದಕ್ಕಿಂತ ಹೆಚ್ಚಿನದ್ದಾಗಿರುವಾಗ ಅನೇಕ ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿಗಳು high FD interest rates (ಹೆಚ್ಚಿನ ಎಫ್‌ಡಿ ಬಡ್ಡಿ ದರಗಳನ್ನು) ನೀಡುತ್ತವೆ. ಇದು ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ನೀವು ಯಾವ ಆದಾಯವನ್ನು ನಿರೀಕ್ಷಿಸಬಹುದು ಎಂಬುದಕ್ಕೆ ಈ ಕೆಳಗೆ ಒಂದು ಉದಾಹರಣೆ ನೀಡಲಾಗಿದೆ. ಕೆಳಗಿನ ಕೋಷ್ಟಕವು 2 ಲಕ್ಷ ರೂ.ಗಳ ಹೂಡಿಕೆಯನ್ನು ಬಜಾಜ್ ಫೈನಾನ್ಸ್‌ ಎಫ್‌ಡಿಯಲ್ಲಿ ಮಾಡಿದಾಗ ನೀವು ಪಡೆಯಬಹುದಾದ ಆದಾಯವನ್ನು ತೋರಿಸುತ್ತದೆ.

ಗ್ರಾಹಕರ ವಿಧ ಅವಧಿ ಬಡ್ಡಿ ದರ ಬಡ್ಡಿ ಮೊತ್ತ ಪಕ್ವತೆ ಮೊತ್ತ
60 ವರ್ಷಗಳಿಗಿಂತ ಕಡಿಮೆ 2 ವರ್ಷಗಳು 6.40% ರೂ. 26,419 ರೂ. 2,26,419
60 ವರ್ಷಗಳಿಗಿಂತ ಕಡಿಮೆ 5 ವರ್ಷಗಳು 6.80% ರೂ. 77,899 ರೂ. 2,77,899
ಹಿರಿಯ ನಾಗರಿಕರು 2 ವರ್ಷಗಳು 6.65% ರೂ. 27,484 ರೂ. 2,27,484
ಹಿರಿಯ ನಾಗರಿಕರು 5 ವರ್ಷಗಳು 7.05% ರೂ. 81,166 ರೂ. 2,81,166

 

ಗಳಿಕೆಗಳಲ್ಲಿನ ವ್ಯತ್ಯಾಸವನ್ನು ಟೇಬಲ್ ಸ್ಪಷ್ಟವಾಗಿ ತೋರಿಸುತ್ತದೆ ಮತ್ತು ದೀರ್ಘಾವಧಿಯಲ್ಲಿ ಹೆಚ್ಚು ಆದಾಯ ಸಿಗುತ್ತದೆ ಎಂಬುದೂ ಇದರಲ್ಲಿ ತಿಳಿಯುತ್ತದೆ. ಆದ್ದರಿಂದ, ನಿಮ್ಮ ಕಷ್ಟಪಟ್ಟು ಗಳಿಸಿದ ಹಣವನ್ನು ಬೆಳೆಸುವುದು ನಿಮ್ಮ ಗುರಿಯಾಗಿರುವಾಗ, ದೀರ್ಘಾವಧಿಯ ಎಫ್‌ಡಿ ಒಂದು ಸರಿಯಾದ ಆಯ್ಕೆಯಾಗಿದೆ.

ಹಂತ ಹಂತವಾಗಿ ಏರಿಕೆಯಾಗುವ ಹೂಡಿಕೆ ಮಾಡಿ ಸ್ಥಿರವಾದ ಆದಾಯ ಆನಂದಿಸಿ

ಹಂತಹಂತವಾಗಿ ಏರಿಕೆಯಾಗುವ ಹೂಡಿಕೆ ಮಾಡುವುದು ನಿಮ್ಮ ಉಳಿತಾಯದೊಂದಿಗೆ ಆದಾಯವನ್ನು ಗಳಿಸಲು ನೀವು ಬಳಸಿಕೊಳ್ಳಬಹುದಾದ ಮತ್ತೊಂದು ಹೂಡಿಕೆ ವಿಧಾನವಾಗಿದೆ. ಇದು ಶಿಫಾರಸು ಮಾಡಲಾದ ವಿಧಾನವಾಗಿದೆ. ಏಕೆಂದರೆ, ಇದು ನಿಮ್ಮ ಇತರ ಹಣಕಾಸಿನ ಗುರಿಗಳೊಂದಿಗೆ ಹೂಡಿಕೆಗಳನ್ನು ಜೋಡಿಸಲು ಅನುವು ಮಾಡಿಕೊಡುತ್ತದೆ. ಇಲ್ಲಿ, ಕೇವಲ ಒಂದು ಎಫ್‌ಡಿಯಲ್ಲಿ ಹೂಡಿಕೆ ಮಾಡುವ ಬದಲು, ನೀವು ಹಂತ ಹಂತವಾದ ಮಾದರಿಯಲ್ಲಿ ಹೂಡಿಕೆ ಮಾಡಿ, ಹಲವು ಎಫ್‌ಡಿಗಳನ್ನು ಮಾಡುತ್ತೀರಿ. ಉದಾಹರಣೆಗೆ, ನೀವು ಮೂರು ವರ್ಷಗಳಲ್ಲಿ ವ್ಯಾಪಿಸಿದ ಮೂರು ಗುರಿಗಳನ್ನು ಹೊಂದಿದ್ದರೆ, ಅದಕ್ಕೆ ಅನುಗುಣವಾಗಿ ಪ್ರತಿ ಗುರಿಯತ್ತ ಹೂಡಿಕೆ ಮಾಡುವುದು ಬುದ್ಧಿವಂತ ವಿಧಾನವಾಗಿದೆ. ಹೀಗೆ ಮಾಡುವುದರಿಂದ, ಆ ರೀತಿಯ ವೆಚ್ಚಗಳಿಗೆ ನಿಮ್ಮ ಉಳಿತಾಯ ಅಥವಾ ಆದಾಯದ ಮೇಲೆ ಮಾತ್ರ ಅವಲಂಬಿಸಿರುವುದಿಲ್ಲ. ಮೆಚುರಿಟಿ ರಿಟರ್ನ್ಸ್‌ ಬೆಂಬಲದಿಂದ, ನಿಮ್ಮ ಗುರಿಗಳನ್ನು ನೀವು ತ್ವರಿತವಾಗಿ ಮತ್ತು ಸುಲಭವಾಗಿ ಸಾಧಿಸಬಹುದು. ಹಂತಹಂತವಾಗಿ ಏರಿಕೆಯಾಗುವ ಹೂಡಿಕೆ ವಿಧಾನಕ್ಕೆ ದೂರದೃಷ್ಟಿಯ ಅಗತ್ಯವಿರುತ್ತದೆ. ಆದರೆ ಸರಿಯಾದ ಯೋಜನೆ ಮಾಡಿದರೆ ಅದು ನಿಮ್ಮ ಪರವಾಗಿ ಕೆಲಸ ಮಾಡಬಹುದು. ಬಜಾಜ್ ಫೈನಾನ್ಸ್ ಸಿಸ್ಟಮ್ಯಾಟಿಕ್ ಡೆಪಾಸಿಟ್ ಪ್ಲಾನ್ (ಎಸ್‌ಡಿಪಿ) ನಿಮಗೆ ಮಾಸಿಕ ಹೂಡಿಕೆಗಳನ್ನು ಮಾಡಲು ಅನುಮತಿಸುತ್ತದೆ. ಇದರಲ್ಲಿನ ಪ್ರತಿಯೊಂದನ್ನೂ ಹೊಸ ಎಫ್‌ಡಿ ರೀತಿ ಲಾಕ್ ಮಾಡಲಾಗಿರುತ್ತದೆ. ನೀವು ಅತಿ ಕಡಿಮೆ, ಅಂದರೆ, ರೂ. 5,000 ಇಂದ ಪ್ರಾರಂಭಿಸಬಹುದು ಮತ್ತು ಸಿಂಗಲ್ ಮೆಚ್ಯೂರಿಟಿ ಸ್ಕೀಮ್ ಅಥವಾ ಮಾಸಿಕ ಮೆಚುರಿಟಿ ಸ್ಕೀಮ್‌ನಿಂದ ಆಯ್ಕೆಮಾಡಿಕೊಳ್ಳಬಹುದು.

ಅತ್ಯುತ್ತಮ ಪಾವತಿಯ ಆಯ್ಕೆಯನ್ನು ಆರಿಸಿ

ನೀವು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಿದಾಗ, ನೀವು ಬಡ್ಡಿ ಪಾವತಿಗಳ ಆವರ್ತನವನ್ನು ಆರಿಸಿಕೊಳ್ಳುತ್ತೀರಿ. ಹಣಕಾಸುದಾರರು ನಿಮಗೆ ಹಲವಾರು ಆಯ್ಕೆಗಳನ್ನು ಹೊಂದಿರುತ್ತಾರೆ ಮತ್ತು ಇವುಗಳು ಮಾಸಿಕ, ತ್ರೈಮಾಸಿಕ, ದ್ವೈ-ವಾರ್ಷಿಕ, ವಾರ್ಷಿಕ ಮತ್ತು ಒಟ್ಟು ಮೊತ್ತದಂತಹ ವೈವಿಧ್ಯ ಶ್ರೇಣಿಯನ್ನು ಹೊಂದಿರುತ್ತವೆ. ಹೀಗಾಗಿ, ನಿಮ್ಮ ಗುರಿಗಳ ಆಧಾರದ ಮೇಲೆ ನೀವು ಆದಾಯವನ್ನು ಹೊಂದಬಹುದು ಮತ್ತು ನಿಮ್ಮ ಉಳಿತಾಯವನ್ನು ಪರಿಣಾಮಕಾರಿಯಾಗಿ ಬೆಳೆಸಿಕೊಳ್ಳಬಹುದು. ವಿಶಿಷ್ಟವಾಗಿ, ಒಟ್ಟು ಮೊತ್ತವು ಅತ್ಯಧಿಕ ಆದಾಯವನ್ನು ನೀಡುತ್ತದೆ ಮತ್ತು ನಿಮ್ಮ ಮೂಲ ಬಂಡವಾಳವನ್ನು ಹೆಚ್ಚಿಸುವುದು ನಿಮ್ಮ ಏಕೈಕ ಉದ್ದೇಶವಾಗಿದ್ದರೆ ನೀವು ಅದನ್ನು ಆರಿಸಿಕೊಳ್ಳಬೇಕು. ನಿಮ್ಮ ನಿಶ್ಚಿತ ಠೇವಣಿಯ ಮೇಲಿನ ಬಡ್ಡಿದರವು ನೀವು ಆಯ್ಕೆಮಾಡುವ ಪಾವತಿಯ ಆಯ್ಕೆಯನ್ನು ಆಧರಿಸಿ ಬದಲಾಗಬಹುದು ಎಂಬುದನ್ನು ಗಮನಿಸಿ. ಹಣಕಾಸುದಾರರು ಸ್ವಲ್ಪ ವಿಭಿನ್ನ ದರಗಳನ್ನು ನೀಡುವುದು ಸಾಮಾನ್ಯವಾಗಿದೆ. ಆದ್ದರಿಂದ ಹೂಡಿಕೆ ಮಾಡುವ ಮೊದಲು ಇದನ್ನು ಪರಿಶೀಲಿಸಿಕೊಳ್ಳಿ.